ನೀನಾಸಮ್ ರಂಗಶಿಕ್ಷಣ ಕೇಂದ್ರದ, 2017-18ನೆಯ ಸಾಲಿನ ತರಗತಿಗೆ ಸೇರಿದ, ವಿದ್ಯಾರ್ಥಿಗಳ ನಾಟಕದಾಟದ ವಿಡಿಯೋ ದಾಖಲೆ.

ದ. ರಾ. ಬೇಂದ್ರೆ ಅವರ ಒಂದು ಕವಿತೆ ಮತ್ತು ಸೇಡಿಯಾಪು ಕೃಷ್ಣಭಟ್ಟರ ಒಂದು ಕವಿತೆಯನ್ನು ಆಧರಿಸಿದ ರಂಗಪ್ರಯೋಗ. ಎರಡೂ ಪದ್ಯಗಳ ಹೆಸರು ಕೃಷ್ಣಾಕುಮಾರಿ.
ಸಂಗೀತ: ಅರುಣ್‌ ಕುಮಾರ್‌ ಎಂ ಮತ್ತು ಎಂ ಪಿ ಹೆಗಡೆ
ವಿನ್ಯಾಸ, ನಿರ್ದೇಶನ: ರಘುನಂದನ

ಆ ಆಟ ನಡೆದದ್ದು ಇಲ್ಲಿ, ಶಿವರಾಮ ಕಾರಂತ ರಂಗಮಂದಿರ, ಹೆಗ್ಗೋಡು, ಕರ್ನಾಟಕ – 577417. ಆಟ ನಡೆದ ದಿನಾಂಕ: 13 ಮೇ 2018.

ಆ ಆಟವನ್ನು ಸೆರೆಹಿಡಿಯಲು ನಮ್ಮ ಬಳಿ ಇದ್ದದ್ದು ಎರಡು ಕ್ಯಾಮೆರಾಗಳು: ಹೊಸದೊಂದು, ಹಳೆಯದೊಂದು. ಎರಡೂ ಕ್ಯಾಮೆರಾಗಳ ತಾಂತ್ರಿಕ ಗುಣಮಟ್ಟವು ಬಹಳ ಸಾಧಾರಣವಾದದ್ದಾಗಿತ್ತು. ಹಾಗಾಗಿ ಈ ಚಿತ್ರಪಟದ ತಾಂತ್ರಿಕ ಗುಣಮಟ್ಟ ಸಾಧಾರಣವಾದದ್ದು ಮಾತ್ರ. ಮೇಲಾಗಿ, ಈ ವಿಡಿಯೋ ದಾಖಲೀಕರಣ ಕೂಡ ಅಸಲು ಕಸುಬುದಾರಿಕೆಯಿಂದ ಕೂಡಿದ್ದಲ್ಲ ಅನ್ನುವುದನ್ನು ಒತ್ತಿ ಹೇಳುತ್ತಿದ್ದೇವೆ. ಆ ಆಟವನ್ನು ವಿಡಿಯೋದಲ್ಲಿ ಸೆರೆಹಿಡಿದದ್ದು ಕೇವಲ ಶೈಕ್ಷಣಿಕ ದಾಖಲೆಯಾಗಿ; ರಂಗಭೂಮಿಯ ಅಧ್ಯಯನವನ್ನು ಗಂಭೀರವಾಗಿ ತೆಗೆದುಕೊಳ್ಳುವವರು ಆಟದ ಈ ದಾಖಲೆಯ ಗುಣಮಟ್ಟವನ್ನು ಅಷ್ಟಾಗಿ ಲೆಕ್ಕಿಸುವುದಿಲ್ಲ, ತಾಳ್ಮೆಯಿಂದ ಇದನ್ನು ನೋಡುತ್ತಾರೆ ಎಂಬ ಎಣಿಕೆಯಿಂದ.

ತಾಂತ್ರಿಕ-ಯಾಂತ್ರಿಕವಾದ ಯಾವುದೇ ದಾಖಲೆಯೂ ಪ್ರತ್ಯಕ್ಷವಾದ, ಅಸಲು ಜೀವಂತವಾದ ಆಟಕ್ಕೆ ಸಮನಲ್ಲ. ದಾಖಲೆಯೊಂದನ್ನು ಕೇಳುವುದಾಗಲಿ, ನೋಡುವುದಾಗಲಿ, ಓದುವುದಾಗಲಿ, ಮಾತನಾಡುವ-ಹಾಡುವ-ಆಡುವ-ಹೇಳುವ-ಕುಣಿಯುವ ಕಲಾವಿದರ ಮುಂದೆ, ಬೇರೆಯವರೊಟ್ಟಿಗೆ, ಕೇಳುಗ-ನೋಡುಗರಾಗಿ ಖುದ್ದಾಗಿ ಇದ್ದು, ಮುದ್ದಾಮು ಕೇಳಿಸಿಕೊಳ್ಳುತ್ತ, ನೋಡುತ್ತ ಆ ಅವರು ನೀಡುವ ಹಿಗ್ಗನ್ನು ಕೊಂಡು, ವಾಪಾಸು ಅವರಿಗೆ ಹಿಗ್ಗನ್ನು ನೀಡುವ ಕೆಳೆತನದ ಅನುಭವವನ್ನು ಯಾವತ್ತೂ ಸರಿಗಟ್ಟಲಾರದು.

ಈ ವಿಡಿಯೋದಲ್ಲಿನ ಆಟದವರೆಲ್ಲ ರಂಗಕಲೆಯಲ್ಲಿ ಒಂದು ವರ್ಷದ ಅಧ್ಯಯನವನ್ನು ಆಗಷ್ಟೆ ಮುಗಿಸುತ್ತಿರುವ ವಿದ್ಯಾರ್ಥಿಗಳು ಮಾತ್ರ, ಮತ್ತು ಎಳೆಯರು, ಅನ್ನುವುದನ್ನು ಮರೆಯದಿರಿ.

ಆದರೆ, ಈ ವಿಡಿಯೋ ದಾಖಲೆಯನ್ನು ನೋಡುವುದರಿಂದ ಆ ರಂಗಪ್ರಯೋಗದ ಒಟ್ಟು ವಿನ್ಯಾಸವೆಂಥದಿತ್ತು, ಆ ಪ್ರಯೋಗ ಮತ್ತು ಆಟಗಳ ಹಿಂದಿನ ನಾಟ್ಯತತ್ತ್ವ ಎಂಥದಿತ್ತು ಅನ್ನುವುದು ನಿಮಗೆ ಒಂದಷ್ಟರಮಟ್ಟಿಗಾದರೂ ತಿಳಿಯುತ್ತದೆ ಎಂದು ಆಶಿಸುತ್ತೇವೆ.

ಈ ದಾಖಲೆಯಲ್ಲಿನ ಮಾತು ಮತ್ತು ಸಂಗೀತವನ್ನು ಸರಿಯಾಗಿ ಕೇಳಿಸಿಕೊಳ್ಳಲು ದಯವಿಟ್ಟು ಇಯರ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಫೋನ್ ಇಲ್ಲವೆ ಹೆಡ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಫೋನ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಗಳನ್ನು ತೊಟ್ಟುಕೊಳ್ಳಿ. ಅಗತ್ಯವಿದ್ದಲ್ಲಿ ವಿಡಿಯೋದ ಓಟವನ್ನು ನಿಲ್ಲಿಸಿ, ಹಿಂದಕ್ಕೆ ಹೋಗಿ ನಿಮಗೆ ಸ್ಪಷ್ಟವಾಗಿ ತಿಳಿಯದ ಭಾಗವನ್ನು ಮತ್ತೊಮ್ಮೆ, ಮಗುದೊಮ್ಮೆ ನೋಡಿ, ಕೇಳಿಸಿಕೊಳ್ಳಿ, ಧೇನಿಸಿಕೊಳ್ಳಿ.

Video recording of a performance given by students of Ninasam Theatre Institute, 2017-18.

A theatre production in Kannada based on a poem written by Da. Ra. Bendre and another by Sediyapu Krishna Bhat, both titled Krishnakumari
Music: Arun kumar M and M P Hegade
Designed and directed by: Raghunandana

The performance was given at Shivarama Karantha Rangamandira, Heggodu, Karnataka – 577417 on 13 May 2018.

We emphasise the fact that this recording is not of professional quality, having been made solely for educational and documentary purposes. We had two cameras, one new, and the other, rather old, and both were low-end cameras. So please bear with the technical quality of the image, as well as with the non-professional technique of the videography.

No recording can ever be the same as the real thing, a live performance. The experience of watching a recording can never match the experience of being a part of the audience of a live performance.

Please remember that the performers are students, young people undergoing a one-year course in the theatre arts and that they gave this performance at the end of that course.

However, we hope that watching this recording will give you some idea of the design of the production and of the performance philosophy that made it.

Do please wear earphones or headphones to hear the spoken words, and the music. If necessary, do stop the running of the video and wind back to see and hear those parts which you were not able to hear, see, or grasp clearly the first time, or the second.