Jan 23, 2024 | Mysore Heritage | 0 comments

ನವೀಕೃತ ಶ್ರೀ ಜಯಚಾಮರಾಜ ಒಡೆಯರ್ ಕುಸ್ತಿ ಅಖಾಡದ ಲೋಕಾರ್ಪಣೆ ಕಾರ್ಯಕ್ರಮ


ಮೈಸೂರಿನ ಪರಂಪರಾಗತ ಕುಸ್ತಿ ಕಲೆಯನ್ನು ಜೀವಂತವಾಗಿಡಲು ಶ್ರೀ ಜಯಚಾಮರಾಜ ಒಡೆಯರ್ ಅವರು 1962ರಲ್ಲಿ ಮೈಸೂರಿನ ದೊಡ್ಡಕೆರೆ ಮೈದಾನದಲ್ಲಿ ಕುಸ್ತಿ ಅಖಾಡವನ್ನು ಲೋಕಾರ್ಪಣೆ ಮಾಡಿದರು. ಈ ಕುಸ್ತಿ ಅಖಾಡಕ್ಕೆ ಮಳೆ, ಬಿಸಿಲಿನಿಂದ ರಕ್ಷಣೆ ನೀಡುವ ಉದ್ದೇಶದಿಂದ 2023ರಲ್ಲಿ ಡಾ. ಪ್ರಮೋದಾದೇವಿ ಒಡೆಯರ್ ಅವರು ಎಚ್.ಎಚ್. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಶನ್ ವತಿಯಿಂದ ಮೇಲ್ಛಾವಣಿಯನ್ನು ನಿರ್ಮಿಸಿದ್ದಾರೆ.

ನೂತನವಾಗಿ ನಿರ್ಮಾಣಗೊಂಡ ನವೀಕೃತ ಶ್ರೀ ಜಯಚಾಮರಾಜ ಒಡೆಯರ್ ಕುಸ್ತಿ ಅಖಾಡದ ಲೋಕಾರ್ಪಣೆ ಕಾರ್ಯಕ್ರಮವನ್ನು ವೀಕ್ಷಿಸಿ. ಮೈಸೂರಿನ ಪರಂಪರೆಯ ನಾಡ (ಮಟ್ಟಿ) ಅತ್ಯಮೋಘ ಕುಸ್ತಿ ಪಂದ್ಯಾವಳಿಯನ್ನು ಕಣ್ತುಂಬಿಕೊಳ್ಳಿ.

  
 

0 Comments

Submit a Comment

Your email address will not be published. Required fields are marked *

Related Articles

Related

No Results Found

The page you requested could not be found. Try refining your search, or use the navigation above to locate the post.