ಕರುಣ ಸಂಜೀವ

ಯಕ್ಷಗಾನ ಗುರು
ಬನ್ನಂಜೆ ಸಂಜೀವ ಸುವರ್ಣರಿಗೆ ಅಭಿನಂದನೆ ಮತ್ತು ಪ್ರಶಸ್ತಿ ಪ್ರದಾನ

ಜುಲೈ 15, 2018 ರವಿವಾರ
ಸ್ಥಳ: ಪುರಭವನ, ಅಜ್ಜರಕಾಡು, ಉಡುಪಿ

ಬನ್ನಂಜೆ ಸಂಜೀವ ಸುವರ್ಣರ ಶಿಷ್ಯೆ ಜರ್ಮನಿಯ
ಕತ್ರೀನ್ ಬೈಂದರ್ ಅವರೊಂದಿಗೆ ಮಾತುಕತೆ, ಪ್ರಾತ್ಯಕ್ಷಿಕೆ
ಸಂಯೋಜನೆ : ಎ. ನಾರಾಯಣ, ಸಂಸ್ಕೃತಿ ಚಿಂತಕ

Interaction with Bannanje Sanjeeva Suvarna’s German Student Catherine Binder
Curated by A Narayana, Cultural Thinker

ಬನ್ನಂಜೆ ಸಂಜೀವ ಸುವರ್ಣ…
ಯಕ್ಷಗಾನ ವಲಯದಲ್ಲಿ ‘ಗುರು’ ಎಂದೇ ಮಾನಿಸಲ್ಪಡುವ ಬನ್ನಂಜೆ ಸಂಜೀವ ಸುವರ್ಣ ಅವರು 20 ಕ್ಕಿಂತಲೂ ಅಧಿಕ ಗುರುಗಳಿಂದ ಯಕ್ಷಗಾನ ಕಲಿತು, ಹದಿನೆಂಟು ವರ್ಷಗಳ ಕಾಲ ಕೋಟ ಶಿವರಾಮ ಕಾರಂತರಿಗೆ ನಿಕಟರಾಗಿ ಅವರ ಯಕ್ಷಗಾನ ಪ್ರಯೋಗದ ತಂಡದಲ್ಲಿದ್ದು, ಕೆಲವು ಕಾಲ ಬಿ. ವಿ. ಕಾರಂತರೊಂದಿಗೆ ಒಡನಾಡಿ, ಮಾಯಾರಾವ್ ಅವರೊಂದಿಗೆ ಕೊರಿಯೋಗ್ರಫಿ ಕಲಿತು, ಎರಡನೆಯ ತರಗತಿಯ ಶಾಲಾವಿದ್ಯೆ ಪಡೆಯದಿದ್ದರೂ ಅಮೆರಿಕ, ಇಂಗ್ಲಾಡ್, ಇಟಲಿ, ರಷ್ಯಾ, ಫ್ರಾನ್‌ಸ್‌, ಸಿಂಗಾಪುರ ಮುಂತಾದ ನಲ್ವತ್ತಕ್ಕಿಂತಲೂ ಅಧಿಕ ದೇಶಗಳಲ್ಲಿ ಓಡಾಡಿ, ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸಿ… ಹೀಗೆ ಸಂಜೀವ ಸುವರ್ಣರ ಬದುಕು ಕಲ್ಪನೆಯ ಕಥನದಂತಿದೆ. ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಪ್ರಾಚಾರ್ಯರಾಗಿರುವ ಬನ್ನಂಜೆ ಸಂಜೀವ ಸುವರ್ಣರು ಇನ್ನೇನು, ಒಂದು ವರ್ಷ ಕಳೆದರೆ 65ರ ಹೊಸ್ತಿಲಲ್ಲಿರುತ್ತಾರೆ. ಇತ್ತೀಚೆಗಷ್ಟೇ ಫ್ರಾನ್‌ಸ್‌‌ನಲ್ಲಿ ಹತ್ತು ದೇಶಗಳ ಕಲಾವಿದರ ಸಮಕ್ಷ ಯಕ್ಷಗಾನದ ದಿಗ್ವಿಿಜಯ ನಡೆಸಿ ಬಂದಿದ್ದಾರೆ. ಪತ್ನಿ ವೇದಾವತಿ ಮತ್ತು ಇಬ್ಬರು ಮಕ್ಕಳೊಂದಿಗೆ ನೆಲೆಸಿರುವ ಸಂಜೀವ ಸುವರ್ಣರ ಮನೆಯ ಹೆಸರು- ‘ಗುರುದಕ್ಷಿಣೆ’.