Kalandugeya Kathe | ಕಾಲಂದುಗೆಯ ಕಥೆ

ಎಚ್. ಎಸ್. ಶಿವಪ್ರಕಾಶ್ ಅವರ ಮದುರೆಕಾಂಡ, ಮಾಧವಿ ಮತ್ತು ಮಾತೃಕಾ — ಈ ಮೂರು ನಾಟಕಗಳ ಸಂಯುಕ್ತರೂಪ ಈ ರಂಗಕೃತಿ. ಈ ಮೂರೂ ನಾಟಕಗಳೂ ದ್ರಾವಿಡ ಸಂಸ್ಕೃತಿಯ ಉತ್ಕ ೃಷ್ಟ ಕುರುಹಾಗಿ ಉಳಿದುಬಂದಿರುವ ತಮಿಳು ಮಹಾಕಾವ್ಯವಾದ ಶಿಲಪ್ಪದಿಕಾರಂ'ನ್ನು ಆಧರಿಸಿದಂಥವು. ಇಳಂಗೋ ಅಡಿಗಳ್ ಅವರಿಂದ ಸುಮಾರು ಕ್ರಿ.ಶ. ನಾಲ್ಕು-ಐದನೆಯ ಶತಮಾನದಲ್ಲಿ ರಚಿತವಾಗಿರಬಹುದಾದಶಿಲಪ್ಪದಿಕಾರಂ’ ಮಹಾಕಾವ್ಯವು ಒಂದು ಕಾಲಂದುಗೆಯ ಕಥೆ. ಕಣ್ಣಗಿ-ಕೋವಲರ ಪ್ರೇಮ ವೃತ್ತಾಂತದ ಹಂದರವನ್ನು ಹಿನ್ನೆಲೆಯಾಗಿಟ್ಟುಕೊಂಡು ಈ ಕಾವ್ಯವು ಪ್ರಾಚೀನ ತಮಿಳಿನ ಚೋಳ-ಪಾಂಡ್ಯ-ಚೇರ ನಾಡಿನ ಬದುಕನ್ನು ಚಿತ್ರಿಸುತ್ತದೆ. ಕಣ್ಣಗಿಯು ಚೋಳರ ಪುಹಾರ್ ನಗರದಲ್ಲಿ ಗೃಹಿಣಿಯಾಗಿ, ಪಾಂಡ್ಯರ ಮದುರೈಯಲ್ಲಿ ವಿಧವೆಯಾಗಿ, ಚೇರನಾಡು ವಂಜಿಯಲ್ಲಿ ದೇವತೆಯಾಗಿ ನೆಲೆಯಾಗುವುದು ಈ ಕಥೆಯ ಪಯಣ. ಸಾಮಾಜಿಕ ವಿಕಾಸ ಮತ್ತು ವೈಯಕ್ತಿಕ ದುರಂತಗಳೆಂಬ ಎರಡು ಡಂಡೆಗಳ ನಡುವೆ ಬಂದುಹೋಗುವ ಬಾಳಿನ ರಸಗಳಿಗೆಗಳನ್ನು ನಾನಾ ಮಾದರಿಯ ಪಾತ್ರ-ಪಾತಳಿಗಳಲ್ಲಿ ಕಟ್ಟುವ ಮಹತ್ತ್ವದ ಪ್ರಯೋಗ ಈ ಮಹಾಕಾವ್ಯದಲ್ಲಿದೆ.ಈ ಕಥೆ ಎಚ್. ಎಸ್. ಶಿವಪ್ರಕಾಶರ ನಾಟಕಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಮರುಹುಟ್ಟು ಪಡೆದಿದೆ; ಶಿಲಪ್ಪದಿಕಾರಂನ ದರ್ಶನವು ಈ ನಾಟಕಗಳಲ್ಲಿ ಸಮಕಾಲೀನ ಜಿಜ್ಞಾಸೆಗಳೊಂದಿಗೆ ಮೇಳವಿಸಿದೆ. ಪ್ರಸ್ತುತ ಪ್ರಯೋಗದಲ್ಲಿ ಈ ಮೂರು ನಾಟಕಗಳ ಆಯ್ದ ಭಾಗಗಳನ್ನೂ `ಶಿಲಪ್ಪದಿಕಾರಂ’ ಮಹಾಕಾವ್ಯದ ತುಣುಕುಗಳನ್ನೂ ಕಾವ್ಯಾತ್ಮಕವಾಗಿ ಹೆಣೆಯುವ ಮೂಲಕ ಸಮಕಾಲೀನ ಸಂದರ್ಭಕ್ಕೆ ಸ್ಪಂದಿಸುವ ನಾಟ್ಯೀಕರಣದತ್ತ ಯತ್ನ ಮಾಡಲಾಗಿದೆ.

Ninasam Tirugata 2016
Playwright: H S Shivaprakash
Music: Bhargava K N
Direction: B R Venkataramana Aithala

0 Comments

Submit a Comment

Your email address will not be published. Required fields are marked *

Related Articles

Related

Venissina Vyapara | ವೆನಿಸ್ಸಿನ ವ್ಯಾಪಾರ

ನೀನಾಸಂ ತಿರುಗಾಟ ೨೦೦೯ರ ರಂಗಪ್ರಯೋಗವಿಲಿಯಂ ಷೇಕ್ಸ್ಪಿಯರ್ ರ "ಮರ್ಚೆಂಟ್‌ ಆಫ್‌ ವೇನಿಸ್"ನ ಕನ್ನಡ ರೂಪಾಂತರರೂಪಾಂತರ ಮತ್ತು ನಿರ್ದೇಶನ: ಅಕ್ಷರ ಕೆ ವಿ A play by Ninasam Tirugata 2009.Kannada adaptation of William Shakespeare's "Merchant of Venice".Adapted and...