Major Barbara Version Two 15 March 2017 | ಮೇಜರ್ ಬಾರ್ಬರಾ 2

ನೀನಾಸಮ್ ರಂಗಶಿಕ್ಷಣ ಕೇಂದ್ರದ 2016-17ರ ಸಾಲಿನ ತರಗತಿಗೆ ಸೇರಿದ ವಿದ್ಯಾರ್ಥಿಗಳ ನಾಟಕದಾಟದ ವಿಡಿಯೋ ದಾಖಲೆ.

ಜಾರ್ಜ್ ಬರ್ನಾರ್ಡ್ ಷಾ ಬರೆದ ಇಂಗ್ಲಿಶ್ ನಾಟಕವನ್ನು ಆಧರಿಸಿದ ರಂಗಪ್ರಯೋಗ.

ಸಂಗೀತ: ಎಂ ಪಿ ಹೆಗಡೆ, ಅರುಣ್‌ ಕುಮಾರ್‌ ಎಂ
ರಚನೆ, ವಿನ್ಯಾಸ, ನಿರ್ದೇಶನ: ರಘುನಂದನ

ನೀನಾಸಮ್ ರಂಗಶಿಕ್ಷಣ ಕೇಂದ್ರದ 2016-17ರ ಸಾಲಿನ ತರಗತಿಗೆ ಸೇರಿದ ವಿದ್ಯಾರ್ಥಿಗಳ ನಾಟಕದಾಟದ ವಿಡಿಯೋ ದಾಖಲೆ ಇದು. ಈ ಆಟ ನಡೆದದ್ದು ಇಲ್ಲಿ, ಶಿವರಾಮ ಕಾರಂತ ರಂಗಮಂದಿರ, ಹೆಗ್ಗೋಡು, ಕರ್ನಾಟಕ – 577417. ಆಟ ನಡೆದ ದಿನಾಂಕ: 15 ಮಾರ್ಚ್ 2017.

ಆ ಆಟವನ್ನು ಸೆರೆಹಿಡಿಯಲು ನಮ್ಮ ಬಳಿ ಇದ್ದದ್ದು ಒಂದು ಕ್ಯಾಮೆರಾ. ಅದರ ತಾಂತ್ರಿಕ ಗುಣಮಟ್ಟವು ತೀರ ಸಾಧಾರಣವಾದದ್ದಾಗಿತ್ತು. ಹಾಗಾಗಿ ಈ ಚಿತ್ರಪಟದ ತಾಂತ್ರಿಕ ಗುಣಮಟ್ಟ ಸಾಧಾರಣವಾದದ್ದು ಮಾತ್ರ. ಮೇಲಾಗಿ, ಈ ವಿಡಿಯೋ ದಾಖಲೀಕರಣ ಕೂಡ ಅಸಲು ಕಸುಬುದಾರಿಕೆಯಿಂದ ಕೂಡಿದ್ದಲ್ಲ ಅನ್ನುವುದನ್ನು ಒತ್ತಿ ಹೇಳುತ್ತಿದ್ದೇವೆ. ಆ ಆಟವನ್ನು ವಿಡಿಯೋದಲ್ಲಿ ಸೆರೆಹಿಡಿದದ್ದು ಕೇವಲ ಶೈಕ್ಷಣಿಕ ದಾಖಲೆಯಾಗಿ; ರಂಗಭೂಮಿಯ ಅಧ್ಯಯನವನ್ನು ಗಂಭೀರವಾಗಿ ತೆಗೆದುಕೊಳ್ಳುವವರು ಆಟದ ಈ ದಾಖಲೆಯ ಗುಣಮಟ್ಟವನ್ನು ಅಷ್ಟಾಗಿ ಲೆಕ್ಕಿಸುವುದಿಲ್ಲ, ತಾಳ್ಮೆಯಿಂದ ಇದನ್ನು ನೋಡುತ್ತಾರೆ ಎಂಬ ಎಣಿಕೆಯಿಂದ.

ನಾಟಕದಾಟವೊಂದರ ತಾಂತ್ರಿಕ-ಯಾಂತ್ರಿಕವಾದ ಯಾವುದೇ ದಾಖಲೆಯೂ ಪ್ರತ್ಯಕ್ಷವಾದ, ಅಸಲು ಜೀವಂತವಾದ ಆಟಕ್ಕೆ ಸಮನಲ್ಲ. ದಾಖಲೆಯೊಂದನ್ನು ಕೇಳುವುದಾಗಲಿ, ನೋಡುವುದಾಗಲಿ, ಓದುವುದಾಗಲಿ, ಮಾತನಾಡುವ-ಹಾಡುವ-ಆಡುವ-ಹೇಳುವ-ಕುಣಿಯುವ ಕಲಾವಿದರ ಮುಂದೆ, ಬೇರೆಯವರೊಟ್ಟಿಗೆ, ಕೇಳುಗ-ನೋಡುಗರಾಗಿ ಖುದ್ದಾಗಿ ಇದ್ದು, ಮುದ್ದಾಮು ಕೇಳಿಸಿಕೊಳ್ಳುತ್ತ, ನೋಡುತ್ತ ಆ ಅವರು ನೀಡುವ ಹಿಗ್ಗನ್ನು ಕೊಂಡು, ವಾಪಾಸು ಅವರಿಗೆ ಹಿಗ್ಗನ್ನು ನೀಡುವ ಕೆಳೆತನದ ಅನುಭವವನ್ನು ಯಾವತ್ತೂ ಸರಿಗಟ್ಟಲಾರದು.

ಈ ವಿಡಿಯೋದಲ್ಲಿನ ಆಟದವರೆಲ್ಲ ರಂಗಕಲೆಯಲ್ಲಿ ಒಂದು ವರ್ಷದ ಅಧ್ಯಯನವನ್ನು ಆಗಷ್ಟೆ ಮುಗಿಸುತ್ತಿರುವ ವಿದ್ಯಾರ್ಥಿಗಳು ಮಾತ್ರ, ಮತ್ತು ಎಳೆಯರು, ಅನ್ನುವುದನ್ನು ಮರೆಯದಿರಿ.

ಆದರೆ, ಈ ವಿಡಿಯೋ ದಾಖಲೆಯನ್ನು ನೋಡುವುದರಿಂದ ಆ ರಂಗಪ್ರಯೋಗದ ಒಟ್ಟು ವಿನ್ಯಾಸವೆಂಥದಿತ್ತು, ಆ ಪ್ರಯೋಗ ಮತ್ತು ಆಟಗಳ ಹಿಂದಿನ ನಾಟ್ಯತತ್ತ್ವ ಎಂಥದಿತ್ತು ಅನ್ನುವುದು ನಿಮಗೆ ಒಂದಷ್ಟರಮಟ್ಟಿಗಾದರೂ ತಿಳಿಯುತ್ತದೆ ಎಂದು ಆಶಿಸುತ್ತೇವೆ.

ಈ ವಿಡಿಯೋವನ್ನು ದಾಖಲೆ ನಡೆಯುತ್ತಿದ್ದಾಗ, ರಂಗಸ್ಥಳಕ್ಕೆ ಧ್ವನಿವರ್ಧಕವನ್ನು ಅಳವಡಿಸಿರಲಿಲ್ಲ. ಆದ್ದರಿಂದ ಮಾತು ಮತ್ತು ಸಂಗೀತವನ್ನು ಸರಿಯಾಗಿ ಕೇಳಿಸಿಕೊಳ್ಳಲು ದಯವಿಟ್ಟು ಇಯರ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಫೋನ್ ಇಲ್ಲವೆ ಹೆಡ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಫೋನ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಗಳನ್ನು ತೊಟ್ಟುಕೊಳ್ಳಿ. ಅವು ಬೇಕೇ ಆಗುತ್ತವೆ.

ಅಗತ್ಯವಿದ್ದಲ್ಲಿ ವಿಡಿಯೋದ ಓಟವನ್ನು ನಿಲ್ಲಿಸಿ, ಹಿಂದಕ್ಕೆ ಹೋಗಿ ನಿಮಗೆ ಸ್ಪಷ್ಟವಾಗಿ ತಿಳಿಯದ ಭಾಗವನ್ನು ಮತ್ತೊಮ್ಮೆ, ಮಗುದೊಮ್ಮೆ ನೋಡಿ, ಕೇಳಿಸಿಕೊಳ್ಳಿ, ಧೇನಿಸಿಕೊಳ್ಳಿ.

ಸಂಚಿ ಯೂಟ್ಯೂಬ್ ಚಾನೆಲ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍ನಲ್ಲಿ ಇದೇ ರಂಗಪ್ರಯೋಗದ ಮತ್ತೊಂದು ಆಟದ ದಾಖಲೆ ಕೂಡ ಸಿಕ್ಕುತ್ತದೆ. 2017ರ ಮೇ 12ರಂದು ನಡೆದ ಆಟದ ದಾಖಲೆ ಅದು. ಅದರಲ್ಲಿ ಇದೇ ತರಗತಿಯ ಮತ್ತೊಂದು ವಿದ್ಯಾರ್ಥಿ-ನಟನಟೀವರ್ಗದ ಅಭಿನಯವಿದೆ. ಅದಕ್ಕೆ ಕೊಂಡಿ: https://www.youtube.com/watch?v=J9RXb5HqiLA&t=735s

Video recording of a performance given the class of 2016-17 of Ninasam Theatre Institute.

A theatre production in Kannada based on a play written in English by George Bernard Shaw.

Music: M P Hegde and Arun Kumar M

Written, designed and directed by: Raghunandana

This video is a record of a performance, given by the class of 2016-17 of Ninasam Theatre Institute, at Shivarama Karantha Rangamandira, Heggodu, Karnataka – 577417 on 15 March 2017.

We emphasise the fact that this recording is not of professional quality, having been made solely for educational and documentary purposes. We had only one camera, and that camera was a low-end camera. So please bear with the technical quality of the image, as well as with the non-professional technique of the videography,

No recording can ever be the same as the real thing, a live performance. The experience of watching a recording can never match the experience of being a part of the audience of a live performance.

Please remember that the performers are students, young people undergoing a one-year course in the theatre arts and that they gave this performance at the end of that course.

However, we hope that watching this recording will give you some idea of the design of the production and of the performance philosophy that made it.

Do please wear earphones or headphones to hear the spoken words, and the music, as the recording was made without audio amplification.

If necessary, do stop the running of the video and wind back to see and hear those parts which you were not able to hear, see, or grasp clearly the first time, or the second.

A recording of another performance of this production, given on 12 May 2017, has also been uploaded on Sanchi YouTube channel. It has another cast of student-actors belonging to this same batch, and can be watched here: https://www.youtube.com/watch?v=J9RXb5HqiLA&t=735s

0 Comments

Submit a Comment

Your email address will not be published. Required fields are marked *

Related Articles

Related

ಕೋಲಾಟ – ರಾವೇ ರಾವುಕುನ್ನಕ್ಕೊ ರಾವೇರೆ…

https://youtu.be/7KV6BHaNpNE?si=DmYTiIv6tvRBvq6t ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೨೨-೨೩ನೇ ಸಾಲಿನ ವಿದ್ಯಾರ್ಥಿಗಳ ಕೋಲಾಟ ಪ್ರದರ್ಶನ ರಾವೇ ರಾವುಕುನ್ನಕ್ಕೊ ರಾವೇರೆ...ನಿರ್ದೇಶನ: ಅರುಣ ಕುಮಾರ ಎಂ. Kolata by Students of Ninasam Theatre Institute 2022-23Raave Ravukunnko Raavere...Direction:...

ಯಕ್ಷರಾಟ | Yaksharaata

https://youtu.be/mVUUstunEjI?si=BQiV-qPqIeDCCklC ನೀನಾಸಮ್ ರಂಗಶಿಕ್ಷಣ ಕೇಂದ್ರ ೨೦೨೨-೨೩ನೇ ಸಾಲಿನ ವಿದ್ಯಾರ್ಥಿಗಳಿಂದಆಂಗಿಕ ವಿನ್ಯಾಸ - ಯಕ್ಷಗಾನ ಹೆಜ್ಜೆಗಾರಿಕೆಯಕ್ಷರಾಟಮಾರ್ಗದರ್ಶನ: ಶೈಲೇಶ್ ತೀರ್ಥಹಳ್ಳಿಭಾಗವತರು: ದಿನೇಶ್ ಭಟ್ ಯಲ್ಲಾಪುರಚಂಡೆ: ರೋಹಿತ್ ಎಸ್.ಮದ್ದಳೆ: ಅರುಣ ಕುಮಾರ...

Nora / ನೋರಾ

ನೀನಾಸಮ್ ರಂಗಶಿಕ್ಷಣ ಕೇಂದ್ರ ೨೦೧೮-೧೯ ವಿದ್ಯಾರ್ಥಿಗಳಿಂದಹೆನ್ರಿಕ್ ಇಬ್ಸೆನ್ ನ "ಎ ಡಾಲ್ಸ್ ಹೌಸ್" ಆಧರಿಸಿದ ನಾಟಕಕನ್ನಡ ಅನುವಾದ: ಹೆಚ್.ಎ. ರಾಮಕೃಷ್ಣನಿರ್ದೇಶನ: ಮಂಜು ಕೊಡಗು A play by Students of Ninasam Theatre Institute 2018-19.Based on: "A Doll's House" by Henrik...