‘ಸಂಚಿ’ ಫೌಂಡೇಶನ್‌ನ ‘ಸಮಕಾಲೀನ ಕನ್ನಡ ರಂಗ ಪ್ರಯೋಗಗಳ ದಾಖಲೀಕರಣ’ ಯೋಜನೆಯ ಅಂಗವಾಗಿ ನಡೆಸಿದ ಮೊದಲ ಪ್ರಯತ್ನದ ಸಣ್ಣ ತುಣುಕು ಈ ಸಾಕ್ಷ್ಯಚಿತ್ರ. ನೀನಾಸಮ್ ಜೊತೆಗೂಡಿ 2015ರ ಅಕ್ಟೋಬರ್ 2 ಮತ್ತು 3ರಂದು ನಡೆಸಿದ ಈ ದಾಖಲೀಕರಣದಲ್ಲಿ ಗುಣಮುಖ, ತಾರ್ತೂಫ್ ಮತ್ತು ‘ಒರೆಸ್ತಿಸ್ ಪುರಾಣ’ ಎಂಬ ಮೂರು ನಾಟಕಗಳ ದೃಶ್ಯ ದಾಖಲೀಕರಣ, ನಿರ್ದೇಶಕರ ಸಂದರ್ಶನ ಮತ್ತು ಕೆ.ವಿ.ಅಕ್ಷರ ಅವರ ಪೀಠಿಕಾ ರೂಪದ ಸಂದರ್ಶನಗಳು ಒಳಗೊಂಡಿವೆ. ರಂಗ ಪ್ರಯೋಗಗಳ ದಾಖಲೀಕರಣದ ಹಾದಿಯಲ್ಲಿ ಇದು ಮೊದಲ ಹೆಜ್ಜೆ. ಸಾಗಬೇಕಾದ ಹಾದಿ ಸುದೀರ್ಘವಾದುದು. ಇದಕ್ಕೆ ನಿಮ್ಮೆಲ್ಲರ ಸಹಾಯ ಬೇಕಾಗಿದೆ. ಈ ಯೋಜನೆಗೆ ಹೇಗೆ ಸಹಕರಿಸಬಹುದು ಎಂಬುದಕ್ಕಾಗಿ www.sanchifoundation.org ನೋಡಿ.
In Its efforts to document the contemporary Kannada plays, Sanchi Foundation has started with the documentation of three plays by Ninasam. This is a short glimpse into the project. On 2nd and 3rd October 2015, three plays, ‘Gunamukha’, ‘Tartuffe’ and ‘Orestis Purana’ were shot. Supporting, academic interviews of K.V. Akshara and three directors of the plays documented were too shot. The entire presentation will be available online for free. This is only a first step. We know we have a long way to walk. It is only possible with your help. To know more about how you can participate in this effort, please visit, www.sanchifoundation.org.
0 Comments