ಶ್ರೀ ರಾಮೇಶ್ವರ ಕೃಪಾಪೋಷಿತ ಯಕ್ಷಗಾನ ಸೂತ್ರದ ಬೊಂಬೆಯಾಟ ಮೇಳ
ಹಲ್ಲರೆಗ್ರಾಮ, ನಂಜನಗೂಡು ತಾಲೂಕು, ಮೈಸೂರು ಜಿಲ್ಲೆ. ಹಲ್ಲರೆ ಅಂಚೆ 571315
23 ಎಪ್ರಿಲ್ 2018ರಂದು
ಹಲ್ಲರೆ ಶ್ರೀಗುರುಮಲ್ಲೇಶ್ವರ ದಾಸೋಹಮಠದಲ್ಲಿ ನಡೆದ ಯಕ್ಷಗಾನ
ಸತ್ಯಹರಿಶ್ಚಂದ್ರ ಪ್ರಸಂಗ
ಈ ಬೊಂಬೆ ಕುಣಿತ ಬಹಳ ಜನಪ್ರಿಯವಾಗಲು, ಜನರಿಗೆ ದೇವ ದಾನವರ ಮುಖವರ್ಣಿಕೆ, ವೇಷ ಭೂಷಣಗಳು ಪರಿಚಯವಾಗಿ, ಭಯ ಹೋದ ಬಳಿಕ ಮಾನವರೇ ವೇಷ ಕಟ್ಟಿಕುಣಿಯಲು ಹೊರಟರು. ಜನರಿಗೆ ದೇವ ದಾನವರ ಚಿತ್ರ ಒಗ್ಗಿತು ಅಲ್ಲದೇ ಭಯ ದೂರವಾಯ್ತು. ನಂಜನಗೂಡು, ಚಾಮರಾಜನಗರ, ಗುಂಡ್ಲುಪೇಟೆ ಸುತ್ತಮುತ್ತಲಿನ ಪ್ರತಿಯೊಂದು ಹಳ್ಳಿಯಲ್ಲೂ ಇದೊಂದು ಜನಪ್ರಿಯ ಸುಲಭ ಮನೋರಂಜನೆ ಕಲೆ ಆಯ್ತು. ಹಾಡು, ಮಾತು ಎಲ್ಲಾ ಸೇರಿಕೊಂಡಿತು. ಅನುಭವಸ್ಥರು ಹೊಸ ಹೊಸ ಪ್ರಸಂಗಗಳನ್ನು ಪ್ರಚಾರಕ್ಕೆ ತಂದರು. ಸುಮಾರು ೨೦-೨೫ ಬೊಂಬೆ ಇದ್ದರೆ ಸಾಕು, ರಾತ್ರಿ ಇಡೀ ಯಾವುದೇ ಪ್ರಸಂಗ ಆಡುವಷ್ಟು ಪರಿಣತಿ ಹೊಂದಿದ್ದರು. ಹಾಸ್ಯ ಮಾಡುವ ಬೊಂಬೆಗಳಿಗೆ ಕೀಲು ಗಳು ಜಾಸ್ತಿ. ಉಳಿದ್ದಸಕ್ಕೆ ಭುಜ, ಸೊಂಟ, ಕೈ ಕಾಲುಗಳಿಗೆ ಕೀಲು ಸಾಕು. ಹಲ್ಲೆರೆಯ ಈ ತಂಡ ಪ್ರಸ್ತುತ ಪಡಿಸುತ್ತಿರುವುದು ಸತ್ಯ ಹರಿಶ್ಚಂದ್ರ. ವಿಡಿಯೋ ಕಾರ್ತೀಕ ಕರ್ಗಲ್ಲು, ಸಹಾಯ ಕರ್ಗಲ್ಲು ವಿಶ್ವೇಶ್ವರ ಭಟ್ ಮತ್ತು ಅನಂತವರ್ಧನ ಪ್ರಾಯೋಜಕರು. ಶ್ರೀ ಮಹಾಲಿಂಗೇಶ್ವರ ದೇವಾಲಯ, ಕೆ. ಹೆಮ್ಮನಹಳ್ಳಿ, ಮೈಸೂರು ತಾ.
ದೇವ ದಾನವರ ಚಿತ್ರಗಳನ್ನು ಮನಸ್ಸಿನಲ್ಲಿ ಗ್ರಹಿಸಿ ಮೊದಲಿಗೇ ಬೊಂಬೆಗಳನ್ನು ಸೃಷ್ಟಿಸಲಾಯ್ತ. ಅದಕ್ಕೆ ಹಗ್ಗ, ತಂತಿ ಅಥವಾ ಕಬ್ಬಿಣದ ಸರಳುಗಳನ್ನು ಸೂತ್ರದಂತೆಮಾಡಿ ಕುಣಿಸಲು ಆರಂಭಗೊಂಡಿತು. ಹಗ್ಗ, ತಂತಿ ಯಲ್ಲಿ ಬಹಳ ಸೂಕ್ಷ್ಮ ಚಲನೆಗಳನ್ನು ಕೊಡಬಹುದು, ಬಹಳ ಅನುಭವ ಪರಿಪಕ್ವತೆಬೇಕು. ಸಲಾಕೆ ಸೀಮಿತ ಚಲನೆಗಳು. ಮೈಸೂರಿನಿಂದ ನಂಜನಗೂಡು ಮಾರ್ಗವಾಗಿ ಈ ಸಲಾಕೆ ಗೊಂಬೆಯಾಟದ ಹಲ್ಲೆರೆ ಗ್ರಾಮಕ್ಕೆ ತಲುಪಬಹುದು. ಸುಮಾರು ೩೦೦ ವರ್ಷಗಳಿಂದ ಈ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಈ ತಂಡದ ಪ್ರಸ್ತುತ ದ ಕಲಾವಿದರ ಹೆಸರುಗಳು ಹೀಗಿವೆ.
ಸಹಾಯ
ಕರ್ಗಲ್ಲು ವಿಶ್ವೇಶ್ವರ ಭಟ್
ಅನಂತವರ್ಧನ
ಪ್ರಾಯೋಜಕರು
ಶ್ರೀ ಮಹಾಲಿಂಗೇಶ್ವರ ದೇವಾಲಯ
ಕೆ. ಹೆಮ್ಮನಹಳ್ಳಿ, ಮೈಸೂರು ತಾಲೂಕು
ಕಲಾವಿದರು
ನಾಗಲಿಂಗಪ್ಪ | ಎಚ್.ಪಿ. ಸಿದ್ದಪ್ಪ
ಭಾಗವತ ಎಚ್.ಸಿ. ತಮ್ಮಣ್ಣಾಚಾರ್ ಮದ್ದಲೆ.
ಎಚ್. ಸಿ. ಶಿವಬುದ್ಧಿಯವರು, ಹಾರ್ಮೋನಿಯಂ(ನಿರ್ದೇಶಕ ರು)
ಬಸವಣ್ಣ ನವರು
ರಾಮಪ್ಪ ತಾಳ.
ಚೆನ್ನಪ್ಪನವರು
ಎಚ್. ಎಮ್. ನಾಗರಾಜು
ಎಚ್. ಎಸ್. ಆನಂದ
ಶಿವರಾಜಪ್ಪ
ರಾಮಣ್ಣ
ಎಚ್.ಪಿ. ಶಿವರಾಜಾಚಾರ್ಯ ಮದ್ದಳೆ
ಬಸವರಾಜು
ಎಚ್.ಟಿ. ರಮೇಶ
ದಾಖಲೀಕರಣ
ಕಾರ್ತೀಕ ಕರ್ಗಲ್ಲು
0 Comments