ಯಕ್ಷಗಾನದ ಬಡಗುತಿಟ್ಟು – ಉತ್ತರದ ಶೈಲಿಯಲ್ಲಿ (ತೆಂಕುತಿಟ್ಟು – ದಕ್ಷಿಣದ ಶೈಲಿಗೆ ವ್ಯತಿರಿಕ್ತವಾಗಿ) ಪ್ರಾದೇಶಿಕವಾದ ಮತ್ತು ವ್ಯಕ್ತಿಗತವಾದ ಗುಣ ಲಕ್ಷಣಗಳು ಇವೆ. ಉಡುಪಿ – ಕುಂದಾಪುರಗಳ ಸುತ್ತಮುತ್ತಲಿನ ಯಕ್ಷಗಾನವನ್ನು ಸಾಮಾನ್ತವಾಗಿ ಬಡಗುತಿಟ್ಟು (ಉತ್ತರ) ಎಂದೂ ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನವನ್ನು ಬಡಾ-ಬಡಗು (ಉತ್ತರದ ಉತ್ತರ) ಎಂದೂ ಗುರುತಿಸುತ್ತಾರೆ.
ಕರ್ಕಿ ಯಕ್ಷಗಾನದ ಸಾಂಪ್ರದಾಯಿಕ ಶೈಲಿಯನ್ನು ಉತ್ತರ ಕನ್ನಡದ ಮೂಲ ರೂಪ ಮತ್ತು ಬಡಾ-ಬಡಗು ತಿಟ್ಟಿನ ಅತಿ ಹಳೆಯ ಮತ್ತು ಪ್ರಾತಿನಿಧಿಕ ಶೈಲಿ ಎಂದು ಸಂಶೋಧಕರು ಮತ್ತು ವಿದ್ವಾಂಸರು ಸ್ಪಷ್ಟವಾಗಿ ಗುರುತಿಸಿ ದಾಖಲಿಸಿದ್ದಾರೆ. ಕರ್ಕಿ ಪರಂಪರೆಗೆ ಮತ್ತು ಮೇಳಕ್ಕೆ ನಮಗೆ ತಿಳಿದಿರುವ ಮಾಡಿದ ಬದಲಾವಣೆಗಳು ಮತ್ತು ಉಡುಪಿ-ಕುಂದಾಪುರ ಬಡಗಿನ ಅಂಶಗಳ ಸೇರ್ಪಡೆಯ ಫಲವಾಗಿ ಬಡಾ-ಬಡಗು ಶೈಲಿಯ ಮಾರ್ಪಾಡಾದ ಕೆಲವು ರೂಪಗಳು ಹೊರಹೊಮ್ಮಿದವು. ಅವುಗಳು ಹಿಂದುಸ್ತಾನಿ ಸಂಗೀತದ ಘರಾನಾಗಳಂತೆ ಯಕ್ಷಗಾನದ ವೈಯಕ್ತಿಕ ಶೈಲಿಗಳೆಂದು ಗುರುತಿಸಲ್ಪಟ್ಟವು. ಜನರು ಹೀಗೆ ಮಾರ್ಪಾಡಾದ ಬಡಾ-ಬಡಗಿನ ರೂಪಗಳನ್ನು ಸಾಮಾನ್ತವಾಗಿ ಅದನ್ನು ಹುಟ್ಟುಹಾಕಿದ ಸಾಧಕರ ಹೆಸರಿನಿಂದ ಗುರುತಿಸುತ್ತಾರೆ. ( ಉದಾಹರಣೆಗೆ ಶ್ರೀ ಕೆರೆಮನೆ ಶಿವರಾಮ ಹೆಗಡೆಯವರ ಶೈಲಿಯು ಕೆರೆಮನೆ ಶೈಲಿ). ಆದರೆ ಮೂಲ ಕರ್ಕಿ ಶೈಲಿಯು ಮುಂದುವರಿದು ಹಿರಿಯ ಪರಮಯ್ಯ ಹಾಸ್ಯಗಾರರ ಶೈಲಿ ಎಂದು ಗುರುತಿಸಲಾಗಿದೆ. ಇದನ್ನು ಸರಳವಾಗಿ ಹಾಸ್ಯಗಾರ ಶೈಲಿ ಅಥವ ಕರ್ಕಿ ಶೈಲಿ ಎಂದೂ (ಮನೆತನದ ಮತ್ತು ಊರಿನ ಹೆಸರಿನಿಂದ) ಕರೆಯುವುದುಂಟು.
Yakshagana Badagu Thittu – Northern Style (Unlike the Thenku Thittu or the Southern Style) has strong traits of performance both regionally and individually. Hence the Yakshagana in and around Udupi and Kundapur is usually referred to as Badagu (North) and the Yakshagana of Uttara Kannada district as Bada-Badagu (North of North). It has been observed and documented by researchers and scholars that unequivocally Karki Yakshagana traditional style is the one and only original style of Uttara Kannada and is the oldest and representative of Bada-badagu Thittu. Karki Style and Mela have a known long history of 9 generations (around over 200 years). A few variations of Bada-Badagu style emerged over a period of time as a result of self-made changes and adoption of traits of Udupi-Kundapur style of Badagu. These were identified as individual styles like Gharanas in Hindustani music. The public usually identifies the individual styles by the family name of the exponent. (Ex.: Keremane Shivarama Hegde style as Keremane style). However original Karki style continued and is identified as Hiriya Paramayya Hasyagar’s style which is also known as Hasyagar’s style or simply Karki style (Family and Regional name).
(Documented in 2005)
Chapters:
00:02
Introduction to the documentation
ದಾಖಲೀಕರಣದ ಪರಿಚಯ
02:24
“Chowki mane” Green Room. Makeup style
ಚೌಕಿ ಮನೆ, ಬಣ್ಣಗಾರಿಕೆಯ ಶೈಲಿ
09:27
“Chowki Pooje” worshiping Lord Ganesh at the Green Room.
ಚೌಕಿ ಪೂಜೆ, ಗಣಪತಿಯ ಸ್ತುತಿ
13:39
“Abbara Taala” the worshiping various deities on the stage.
ಅಬ್ಬರ ತಾಳ, ವಿವಿಧ ದೇವರುಗಳ ಸ್ತುತಿ
25:29
Introduction of ‘Adinarayana’ and Curtain Dance
ಆದಿನಾರಾಯಣ ಪಾತ್ರದ ಮುನ್ನುಡಿ ಮತ್ತು ತೆರೆಕುಣಿತ
33:40
Curtain Dance of Krishna
ಕೃಷ್ಣನ ತೆರೆಕುಣಿತ
41:03
Krishna and Jambavanta Tussle (Episode: Jambavati Parinaya)
ಕೃಷ್ಣ ಮತ್ತು ಜಾಂಬವಂತರ ಕಾದಾಟ (ಪ್ರಸಂಗ: ಜಾಂಬವತಿ ಪರಿಣಯ)
55:14
Hanuma’s Curtain Dance
ಹನುಮಂತ ಪಾತ್ರದ ತೆರೆಕುಣಿತ
01:05:47
Lankini (Demoness) Curtain Dance
ಲಂಕಿಣಿಯ (ರಕ್ಕಸಿ – ಹೆಣ್ಣು ಬಣ್ಣ) ತೆರೆಕುಣಿತ
01:14:24
Lankini’s stroll in the night (Episode: Lanka Dahana)
ಲಂಕಿಣಿಯ ರಾತ್ರಿ ಕಾಲದ ಸಂಚಾರ (ಪ್ರಸಂಗ: ಲಂಕಾ ದಹನ)
01:18:05
Lankini and Hanuma Tussle (Episode: Lanka Dahana)
ಲಂಕಿಣಿ ಮತ್ತು ಹನುಮಂತರ ಯುದ್ಧ (ಪ್ರಸಂಗ: ಲಂಕಾ ದಹನ)
01:24:42
Selected songs of Hanuma from Sharasethu Bandhana episode
ಶರಸೇತು ಬಂಧನ ಪ್ರಸಂಗದ ಹನುಮಂತನ ಆಯ್ದ ಪದ್ಯಗಳು
01:27:48
Introduction of Arjuna and Arjuna Curtain Dance
ಅರ್ಜುನ ಪಾತ್ರದ ಮುನ್ನುಡಿ ಮತ್ತು ತೆರೆಕುಣಿತ
01:40:43
Introduction of Shabara and Curtain Dance
ಶಬರ ಪಾತ್ರದ ಮುನ್ನುಡಿ ಮತ್ತು ತೆರೆಕುಣಿತ
02:03:34
Shabara and Arjuna Battle (Episode: Kiratarjuna Kalaga)
ಶಬರ ಮತ್ತು ಅರ್ಜುನರ ಯುದ್ಧ (ಪ್ರಸಂಗ: ಕಿರಾತಾರ್ಜುನ ಕಾಳಗ)
02:05:43
Kimmira, Danava (Demon) Curtain Dance
ಕಿಮ್ಮೀರನ (ರಕ್ಕಸ – ಗಂಡು ಬಣ್ಣ) ತೆರೆಕುಣಿತ
02:22:55
Lali Kunitha (Dance)
ಲಾಲಿ ಕುಣಿತಗಳು
02:27:54
Selected songs of Babruvahana from Babrivahana Kalaga Episode
ಬಬ್ರುವಾಹನ ಕಾಳಗ ಪ್ರಸಂಗದ ಬಬ್ರುವಾಹನ ಪಾತ್ರದ ಆಯ್ದ ಪದ್ಯಗಳು
02:36:35
Interview and Interaction with the Artists
ಕಲಾವಿದರ ಜೊತೆ ಸಂದರ್ಶನ ಮತ್ತು ಸಂವಾದ
0 Comments