Satyaharishchandra prasanga – Puppet Show | ಸತ್ಯಹರಿಶ್ಚಂದ್ರ ಪ್ರಸಂಗ – ಬೊಂಬೆಯಾಟ

ಶ್ರೀ ರಾಮೇಶ್ವರ ಕೃಪಾಪೋಷಿತ ಯಕ್ಷಗಾನ ಸೂತ್ರದ ಬೊಂಬೆಯಾಟ ಮೇಳ
ಹಲ್ಲರೆಗ್ರಾಮ, ನಂಜನಗೂಡು ತಾಲೂಕು, ಮೈಸೂರು ಜಿಲ್ಲೆ. ಹಲ್ಲರೆ ಅಂಚೆ 571315

23 ಎಪ್ರಿಲ್ 2018ರಂದು
ಹಲ್ಲರೆ ಶ್ರೀಗುರುಮಲ್ಲೇಶ್ವರ ದಾಸೋಹಮಠದಲ್ಲಿ ನಡೆದ ಯಕ್ಷಗಾನ
ಸತ್ಯಹರಿಶ್ಚಂದ್ರ ಪ್ರಸಂಗ

ಈ ಬೊಂಬೆ ಕುಣಿತ ಬಹಳ ಜನಪ್ರಿಯವಾಗಲು, ಜನರಿಗೆ ದೇವ ದಾನವರ ಮುಖವರ್ಣಿಕೆ, ವೇಷ ಭೂಷಣಗಳು ಪರಿಚಯವಾಗಿ, ಭಯ ಹೋದ ಬಳಿಕ ಮಾನವರೇ ವೇಷ ಕಟ್ಟಿಕುಣಿಯಲು ಹೊರಟರು. ಜನರಿಗೆ ದೇವ ದಾನವರ ಚಿತ್ರ ಒಗ್ಗಿತು ಅಲ್ಲದೇ ಭಯ ದೂರವಾಯ್ತು. ನಂಜನಗೂಡು, ಚಾಮರಾಜನಗರ, ಗುಂಡ್ಲುಪೇಟೆ ಸುತ್ತಮುತ್ತಲಿನ ಪ್ರತಿಯೊಂದು ಹಳ್ಳಿಯಲ್ಲೂ ಇದೊಂದು ಜನಪ್ರಿಯ ಸುಲಭ ಮನೋರಂಜನೆ ಕಲೆ ಆಯ್ತು. ಹಾಡು, ಮಾತು ಎಲ್ಲಾ ಸೇರಿಕೊಂಡಿತು. ಅನುಭವಸ್ಥರು ಹೊಸ ಹೊಸ ಪ್ರಸಂಗಗಳನ್ನು ಪ್ರಚಾರಕ್ಕೆ ತಂದರು. ಸುಮಾರು ೨೦-೨೫ ಬೊಂಬೆ ಇದ್ದರೆ ಸಾಕು, ರಾತ್ರಿ ಇಡೀ ಯಾವುದೇ ಪ್ರಸಂಗ ಆಡುವಷ್ಟು ಪರಿಣತಿ ಹೊಂದಿದ್ದರು. ಹಾಸ್ಯ ಮಾಡುವ ಬೊಂಬೆಗಳಿಗೆ ಕೀಲು ಗಳು ಜಾಸ್ತಿ. ಉಳಿದ್ದಸಕ್ಕೆ ಭುಜ, ಸೊಂಟ, ಕೈ ಕಾಲುಗಳಿಗೆ ಕೀಲು ಸಾಕು. ಹಲ್ಲೆರೆಯ ಈ ತಂಡ ಪ್ರಸ್ತುತ ಪಡಿಸುತ್ತಿರುವುದು ಸತ್ಯ ಹರಿಶ್ಚಂದ್ರ. ವಿಡಿಯೋ ಕಾರ್ತೀಕ ಕರ್ಗಲ್ಲು, ಸಹಾಯ ಕರ್ಗಲ್ಲು ವಿಶ್ವೇಶ್ವರ ಭಟ್ ಮತ್ತು ಅನಂತವರ್ಧನ ಪ್ರಾಯೋಜಕರು. ಶ್ರೀ ಮಹಾಲಿಂಗೇಶ್ವರ ದೇವಾಲಯ, ಕೆ. ಹೆಮ್ಮನಹಳ್ಳಿ, ಮೈಸೂರು ತಾ.

ದೇವ ದಾನವರ ಚಿತ್ರಗಳನ್ನು ಮನಸ್ಸಿನಲ್ಲಿ ಗ್ರಹಿಸಿ ಮೊದಲಿಗೇ ಬೊಂಬೆಗಳನ್ನು ಸೃಷ್ಟಿಸಲಾಯ್ತ. ಅದಕ್ಕೆ ಹಗ್ಗ, ತಂತಿ ಅಥವಾ ಕಬ್ಬಿಣದ ಸರಳುಗಳನ್ನು ಸೂತ್ರದಂತೆಮಾಡಿ ಕುಣಿಸಲು ಆರಂಭಗೊಂಡಿತು. ಹಗ್ಗ, ತಂತಿ ಯಲ್ಲಿ ಬಹಳ ಸೂಕ್ಷ್ಮ ಚಲನೆಗಳನ್ನು ಕೊಡಬಹುದು, ಬಹಳ ಅನುಭವ ಪರಿಪಕ್ವತೆಬೇಕು. ಸಲಾಕೆ ಸೀಮಿತ ಚಲನೆಗಳು. ಮೈಸೂರಿನಿಂದ ನಂಜನಗೂಡು ಮಾರ್ಗವಾಗಿ ಈ ಸಲಾಕೆ ಗೊಂಬೆಯಾಟದ ಹಲ್ಲೆರೆ ಗ್ರಾಮಕ್ಕೆ ತಲುಪಬಹುದು. ಸುಮಾರು ೩೦೦ ವರ್ಷಗಳಿಂದ ಈ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಈ ತಂಡದ ಪ್ರಸ್ತುತ ದ ಕಲಾವಿದರ ಹೆಸರುಗಳು ಹೀಗಿವೆ.

ಸಹಾಯ
ಕರ್ಗಲ್ಲು ವಿಶ್ವೇಶ್ವರ ಭಟ್
ಅನಂತವರ್ಧನ

ಪ್ರಾಯೋಜಕರು
ಶ್ರೀ ಮಹಾಲಿಂಗೇಶ್ವರ ದೇವಾಲಯ
ಕೆ. ಹೆಮ್ಮನಹಳ್ಳಿ, ಮೈಸೂರು ತಾಲೂಕು

ಕಲಾವಿದರು
ನಾಗಲಿಂಗಪ್ಪ | ಎಚ್.ಪಿ. ಸಿದ್ದಪ್ಪ
ಭಾಗವತ ಎಚ್.ಸಿ. ತಮ್ಮಣ್ಣಾಚಾರ್ ಮದ್ದಲೆ.
ಎಚ್. ಸಿ. ಶಿವಬುದ್ಧಿಯವರು, ಹಾರ್ಮೋನಿಯಂ(ನಿರ್ದೇಶಕ ರು)
ಬಸವಣ್ಣ ನವರು
ರಾಮಪ್ಪ ತಾಳ.
ಚೆನ್ನಪ್ಪನವರು
ಎಚ್. ಎಮ್. ನಾಗರಾಜು
ಎಚ್. ಎಸ್. ಆನಂದ
ಶಿವರಾಜಪ್ಪ
ರಾಮಣ್ಣ
ಎಚ್.ಪಿ. ಶಿವರಾಜಾಚಾರ್ಯ ಮದ್ದಳೆ
ಬಸವರಾಜು
ಎಚ್.ಟಿ. ರಮೇಶ

ದಾಖಲೀಕರಣ
ಕಾರ್ತೀಕ ಕರ್ಗಲ್ಲು

0 Comments

Submit a Comment

Your email address will not be published. Required fields are marked *

Related Articles

Related

Dignitaries on Bannanje Sanjeeva Suvarna | ಬನ್ನಂಜೆ ಸಂಜೀವ ಸುವರ್ಣರ ಕುರಿತಾಗಿ ಗಣ್ಯರ ಮಾತುಗಳು

https://www.youtube.com/watch?v=BScAYmOPOjM ಕರುಣ ಸಂಜೀವ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣರಿಗೆ ಅಭಿನಂದನೆ ಮತ್ತು ಪ್ರಶಸ್ತಿ ಪ್ರದಾನ ಜುಲೈ 15, 2018 ರವಿವಾರ ಸ್ಥಳ: ಪುರಭವನ, ಅಜ್ಜರಕಾಡು, ಉಡುಪಿ ಬನ್ನಂಜೆ ಸಂಜೀವ ಸುವರ್ಣ... ಯಕ್ಷಗಾನ ವಲಯದಲ್ಲಿ ‘ಗುರು’ ಎಂದೇ ಮಾನಿಸಲ್ಪಡುವ ಬನ್ನಂಜೆ ಸಂಜೀವ ಸುವರ್ಣ ಅವರು...

ಸಂಪೂರ್ಣ ರಾಮಾಯಣ – ಯಕ್ಷಗಾನ ಪ್ರಸಂಗ | The Comprehensive Tale Of Ramayana | A Yakshagana Performance

https://youtu.be/qLC89a7Az9c?si=qWh7QDq7d71I4F-b ಕವಿ ಪಾರ್ತಿಸುಬ್ಬ ಅವರ ಪ್ರಸಿದ್ಧ ಯಕ್ಷಗಾನ ಪ್ರಸಂಗ ‘ಸಂಪೂರ್ಣ ರಾಮಾಯಣ’. ಇದರ ಪ್ರದರ್ಶನ, ಕೆ. ಹೆಮ್ಮನಹಳ್ಳಿಯ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ,ದಿನಾಂಕ:10.09.2023ರಲ್ಲಿ ನಡೆಯಿತು. ಧರ್ಮಸ್ಥಳದ ನಿಡ್ಲೆಯ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ) ಅವರಿಂದ...

ಮಹಿಷಮರ್ಧಿನಿ ಶ್ರೀದೇವಿ ಮಹಾತ್ಮೆ

https://youtu.be/f0cIrOKwxDg?si=5KP1LCJMo32ZSOeS ದಿನಾಂಕ 07.09.2022 ಬುಧವಾರ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ಮಹಿಷಮರ್ಧಿನಿ ಶ್ರೀದೇವಿ ಮಹಾತ್ಮೆ ತೆಂಕುತಿಟ್ಟು ಯಕ್ಷಗಾನ ಬಯಲಾಟ ಕವಿ : ಅಗರಿ ಶ್ರೀನಿವಾಸ ಭಾಗವತರುದ.ಕ.ಜಿಲ್ಲೆಯ ಶಿಶಿಲದ ಶ್ರೀ ವನದುರ್ಗಾ ಕೃಪಾಪೋಷಿತ ನಡುಮನೆ ಯಕ್ಷಗಾನ ತಂಡ ಹಿಮ್ಮೇಳಭಾಗವತರು :...